Thursday, May 3, 2012

ಬರಿದಾದ ರಾತ್ರಿಯಲಿ.......


----------------------------------
ಬರಿದಾದ ರಾತ್ರಿಯಲಿ.......
----------------------------------

ದುಗುಡ ದುಖವ ಮರೆತು , ಕೆಲಸ ಕಾರ್ಯದ ಹೊರತು |
ಕಣ್ಮುಚ್ಚಿ ಕುಳಿತಿರುವೆ ಕನ್ನಡಿಯ ಮುಂದೆ ||

ಹಸೆಯಲ್ಲಿ ಹೊರಳಾಡಿ , ದಿಂಬಿನಲಿ ಮಿಸುಕಾಡಿ |
ಬರಿದಾದ ರಾತ್ರಿಯಲಿ ನೀ ಬರ್ವ್ಯೆನ್ದು ಕಾದೆ ||

ಮನಸನ್ನೆ ಮರೆತಿರುವೆ, ದುಡಿ ದಣಿದು ಸೋತಿರುವೆ |
ಇಷ್ಟಾದರೂ ಬರಬಾರದೇ ......  ಒನ್ದಿನಿತು ನಿದ್ದೆ ||

-- ರಾಜವರ್ಧನ

No comments: