Thursday, May 31, 2012

Bisleri ನೀರು


This is an article by my dearest friend  ರೋಹಿತ ತಂತ್ರಿ. Its a Nice article. Depicts the reality of current life which is extravagantly plastic !!. You all must read this... Posting it on Rohitha's behalf.


ವಾರದಲ್ಲಿ ಎರಡು ಮೂರು ಬಾರಿ Bisleri ನೀರು ತರಿಸುತ್ತೇನೆ ಮನೆಗೆ. 20 ಲೀಟರ್, 75 ರುಪಾಯಿಸಣ್ಣ ಗಾತ್ರದ ಹುಡುಗನೊಬ್ಬ ಒಂದು ದೊಡ್ಡ bottleನಲ್ಲಿ ತಂದು ಕೊಟ್ಟು ಹೋಗುತ್ತಾನೆ. ನಗು ಮುಖ ಅವನದ್ದು. ನಾನೂ ಸಹಜವಾಗಿಯೇ ನಗುತ್ತೇನೆ ಅವನ ನಗುವಿಗೆ ಪ್ರತಿಯಾಗಿ. ನಗುವುದು ಸಹಜವಾದ ಕ್ರಿಯೆಅಲ್ಲ್ವೇಮತ್ತೆ ಏನಪ್ಪಾ ನಿನ್ನ ಸಮಸ್ಯೆ ಅಂತೀರಾ..ನಗು ಮುಖದಿಂದ ಬರಮಾಡಿಕೊಂಡ ಆ ನೀರೇ ನನ್ನ ಸಮಸ್ಯೆ. ದುಡ್ಡು ಕೊಟ್ಟು ನೀರು ತರಬೇಕಾಯ್ತು ಅಂತಲ್ಲ. ಆ ನೀರು ಕೃತಕ ಅಂತ ನನಗನ್ನಿಸುತ್ತೆ. ಅದರ ರುಚಿ ಶುದ್ಧ artificial ಅಂತ ಮನಸು ಕಹಿ ಕಕ್ಕುತ್ತದೆ. ವಿಧಿಯಿಲ್ಲದೆ ಅದನ್ನೇ ಕುಡಿಯುವುದು ಅಭ್ಯಾಸ ಆಗೋಗಿದೆ. ಮನಸಿನ ಮೌನ ಪ್ರತಿಭಟನೆಯನ್ನು ಅದೇ ಕೃತಕ ನೀರು ತಣ್ಣೀರೆರಚಿ ತಂಪಾಗಿಸಿದೆ(?). ಬಹುಶಃ ನನ್ನ ಮನಸು ಕೂಡ ಕೃತಕವಾದ ಒಂದು ಸಮಾಧಾನವನ್ನ ಅಭ್ಯಾಸ ಮಾಡಿಕೊಂಡಂತಿದೆ. Officeಗೆ ಬಂದರೆ ಇಲ್ಲಿ ವಾತಾನುಕೂಲಿತ ವಾತಾವರಣ. ಆಂಗ್ಲ ಭಾಷೆಯಲ್ಲಿ Air Conditioning ಅಂತ ನಾವೇನು style ಆಗಿ ಹೇಳುತ್ತೇವೆಯೋಅದು. ಅದಿಕ್ಕೆ ಯಾಕಪ್ಪ ರೊಳ್ಳೆ ತೆಗಿತಿ ಅಂತೀರಾ..ಮತ್ತದೇ ಸಮಸ್ಯೆಆ ವಾತಾವರಣ ಕೃತಕ ಅಂತ ಅನಿಸುತ್ತದೆ. ತಂಪಾದ ವಾತಾವರಣದಲ್ಲಿ ಗಣಕ ಯಂತ್ರದ ಮುಂದೆ ಕೂತು ಕೆಲಸ ಮಾಡೋದೇ ಮಹಾ ಭಾಗ್ಯ, modern ಅಂತ ಕರೆಯಿಸಿ ಕೊಳ್ಳೋ ಜಗತ್ತಿದುಇದುವೇ ಜೀವನ ಶೈಲಿಇದೇ ಜೀವನಮುಂದಿನ ಜಗತ್ತು ಹೀಗೆ ಬದುಕೋದು, modern ಹುಡುಗ ನೀನುಆಗಲ್ಲ ಅಂದ್ರೆ ಹೇಗೆ? Adjust ಮಾಡ್ಕೊಬೇಕಪ್ಪ ಅಂತೀರಾ...ಹೌದು ಬಿಡಿಈ ಕೃತಕತೆಯ ಸುಳಿಗೆ ಸಿಲುಕಿ ಅಂತರಾತ್ಮ ವಿಲವಿಲಾಂತ ಒದ್ದಾಡುತ್ತ ಇದ್ದದ್ನ ನಾನೇ ಬೇಕುಂತ್ಲೇ ನಿರ್ಲಕ್ಷಿಸಿದ್ದೇನೆ. ನನ್ನ ಭಾವನೆಗಳನ್ನೇ ಕಡೆಗಾಣಿಸಿ ಮುನ್ನುಗ್ಗುವಷ್ಟು ಕೃತಕವಾಗಿ ಬಿಟ್ಟೆನೆ..ಉತ್ತರಕ್ಕಾಗಿ ನಾನು ಬರೆಯುತ್ತಿಲ್ಲ. ಅಡುಗೆ ಮಾಡಲು ಹೋದರೆಕಣ್ಣಿಗೆ ಬರೀ readymade, ready to cook, ready to eat ಅಂತ ಲೇಬಲ್ ಅಂಟಿಸಿಕೊಂಡು ಕೂತಿರೋ ಪದಾರ್ಥಗಳ ದರ್ಶನ. ಮನುಷ್ಯ ಒಂದೊಳ್ಳೆ ಅಡುಗೆಯನ್ನೂ ಮಾಡಲಾರದಷ್ಟು ಕೃತಕವಾದನೆಅಥವಾ ಸೋಮಾರಿತನವೇಶುದ್ಧ ಹಣ್ಣಿನ ರಸ ಕುಡಿಯಲು ಹೋದರೆ ಕಣ್ಣಿಗೆ ಕುಕ್ಕುವ ಬಗೆ ಬಗೆಯ ಥಳಕು ಬಳುಕಿನ canಗಳು, tinಗಳು. ಕುಡಿದರೆ ಮತ್ತದೇ ಕೃತಕ ಲೋಕದ ಅಸಹ್ಯ ದರ್ಶನ. ಆದರೆ ಕೈನಲ್ಲಿ ಅದನ್ನ styleಆಗ್ ಹಿಡ್ಕೊಂಡು ಹೀರಿದರೆಕ್ಷಮಿಸಿ sip’ ಮಾಡಿದರೆ ನಿಮ್ಮ ಅಂತಸ್ತು ಒಂದು ಹೆಜ್ಜೆ ಮೇಲೆ ಅಂತೆ. ಬೇಡ ಅಂತ ನಿರಾಕರಿಸಿದ್ರೆ ಏ ಯಾಕೋಚೆನ್ನಾಗಿರತ್ತೆಕುಡಿಬೇಕು ಅಂತ ಗೆಳೆಯರ ಸಲಹೆಗಳುಪುಂಖಾನುಪುಂಖ ಪ್ರಲಾಪಗಳು. ಅಯ್ಯೋ ಅದೆಲ್ಲ ಬಿಡಿಮನುಷ್ಯನ ಭಾವನೆಗಳೂ ಎಷ್ಟೊಂದು ಕೃತಕವಾಗಿ ಹೋಗುತಿವೆ ಕಾಲ ಬದಲಾದಂತೆಒಳ್ಳೆಯ ಮನಸ್ಸಿನಿಂದ ಜೊತೆ ಕೊಡುವವರಿಲ್ಲತಮ್ಮ ಮೌನದಿಂದಲೇ ಹಿತ ನೀಡುವವರಿಲ್ಲನಮ್ಮಿಂದ ಕೆಲಸ ಆಗಬೇಕಾಗಿಲ್ಲದಿದ್ರೂ ಒಂದೆರಡು ನಿಮಿಷ ಭಾವನೆಗಳಿಗೆ ಕಿವಿಯಾಗುವವರಿಲ್ಲಮುಖ ನೋಡಿ ಕಪಟವಿಲ್ಲದೆ ನಕ್ಕರೆ ವಾಪಾಸು ನಗುವವರಿಲ್ಲ. ಯಾಕೆಯಾಕೆ ಹೀಗಾಯ್ತು ಮನುಕುಲಯಾಕಷ್ಟು ಕೃತಕವಾದ ಜೀವನ ಅಪ್ಪಿಕೊಂಡು ಅದನ್ನ ಸಹಿಸಿಕೊಂಡು ಅದರೊಂದಿಗೇ ಬದುಕುತ್ತಿದ್ದೇವೆಅಯ್ಯೋ ಬಿಡಿ ಸಾರ್ನಾವು ಅತಿಯಾಗಿ ನಂಬಿಕೊಂಡಿರುವ ಆ ದೇವರ ಮುಂದಿನ ದೀಪ ಕೂಡ switchನಿಂದ ಹಚ್ಚಿಕೊಳ್ಳುತ್ತವೆಇಂಥಾ ದಿನಗಳಲ್ಲಿ ನೆನಪುಗಳು ಮಾತ್ರ ನೈಜತೆಯ ಸಹಜತೆಯ ತಾಜಾತನ ಹೊದ್ದಿರಲು ಸಾಧ್ಯ.
ಮತ್ತೇ ನೆನಪುಗಳನ್ನೂ ಕೃತಕ ಮಾಡಿಕೊಳ್ಳದಿರಿ J please!! (ನಾವು ಉಪಯೋಗಿಸೋದು ಹೆಚ್ಚಿನವು ಕೃತಕವೇಹಾಗಾಗಿ ನಮ್ಮ ನೆನಪುಗಳು ಕೂಡ ಕೃತಕವಾದೀತೇಉತ್ತರಕ್ಕಾಗಿ ಕಾಯಬೇಡಿಅದು ನಮ್ಮಲ್ಲೇ ಇದೇ).

ಇಂತಿ ನಿಮ್ಮ,
ರೋಹಿತ ತಂತ್ರಿ.

No comments: