Wednesday, March 19, 2014

ಬಾಯಿ ಮಾತು !!



ಬೊಟ್ಟು ನಿನ್ನದು ಎದೆಗೆ ಜಾರಿ
ಕಣ್ಣ ಕೊರೆಯಿತು ಸೀಮೆ ಹಾರಿ|
ಕರೆದು ಹೇಳದೆ ವಿಧಿಯೆ ಇಲ್ಲ
ತೆರೆದ ಮನಸದು ಕಪಟವಿಲ್ಲ|
ಬಾಯಿಬಡುಕನಾ ಭಾಷೆ ಕೆಂಪು
ಅದರ ಮರುಳಿಗೆ ನೀ ಲಜ್ಜೆಗೆಂಪು|
ತತ್ತ್ವ ಸತ್ವದ ಚಿಂತೆಯಿಲ್ಲ
ನಿನ್ನ ಪರಿಧಿಯ ಅರಿವು ಇಲ್ಲ|
ಕೊನೆಯ ಕೊಸರಿನ ಕಂಪು ನಾನು
ಎಲ್ಲ ಅರಿಯುವ ಜಾಣೆ ನೀನು|

-- ರಾಜವರ್ಧನ