Friday, December 7, 2012

ಕಾಶ್ಯಪರು !!

ಕಾಶ್ಯಪರು
-------------

...........


ನಾನೊಲ್ಲೆ ಎಂದೆ ನೀ ನಲ್ಲೆ |

ನಿನ್ನೆದೆಯ ದುಗುಡವ ನಾನರಿಯೆನೇ ||

ಸೊಗಡಿಹುದು ನನ್ನಲ್ಲಿ , ಕಣ್ಬಿಟ್ಟು ನೋಡೊಮ್ಮೆ |

ದಾನವನೂ ಕಾಶ್ಯಪನೆ , ವಾಮನನೂ ಕಾಶ್ಯಪನೆ ||

ದೈತ್ಯ ಅಪ್ಸರೆಯರ ಅಪ್ಪ ಒಂದಲ್ಲವೇ |

ನಮ್ಮಿಬ್ಬರಾ ಮನದ ಕೆಸರು ಕಪ್ಪಲ್ಲವೇ ||

ನಾನೊಲ್ಲೆ ಎಂದೆ ನೀ ನಲ್ಲೆ |

ಸೊಗಡಿಹುದು ನನ್ನಲ್ಲಿ , ಕಣ್ಬಿಟ್ಟು ನೋಡೊಮ್ಮೆ ||

............

-Rajavardhan Bhat

Wednesday, December 5, 2012

ನೀನು !!


ನೀನು
-----------

.........

ಕಡುನೀಲಿ ಕಣ್ಣುಗಳೇ , ನಿಮ್ಮಾಳ ತಿಳಿಯದೆನಗೆ

ಬಳಿ ನಿಂತು ಅಳೆಯುವಾಸೆ , ತಲೆ ತನಕ ಮುಳುಗುವಾಸೆ

ಕಾಡಿಗೆಯ ಕಪ್ಪಾಗ್ಲಾ , ಅಧರದ ಮುತ್ತಾಗ್ಲಾ

ನಸುಗೆನ್ನೆ ಕೆಂಪಾಗ್ಲಾ , ಹಣೆಯ ಬೊಟ್ಟಾಗ್ಲಾ

ನೀಳ ನಾಸಿಕದಲ್ಲೊಂದು, ಪುಟ್ಟ ಮೂಗುತಿಯಾಗ್ಲಾ

ತಿಳಿಯದೇ ಜಾರಿರುವೆ , ಎದೆತನಕ ತನಕ ಮುಳುಗಿರುವೆ

ಕಡುನೀಲಿ ಕಣ್ಣುಗಳೇ , ನಿಮ್ಮಾಳ ತಿಳಿಯದೆನಗೆ

-Rajavardhan Bhat

.........

Thursday, May 31, 2012

Bisleri ನೀರು


This is an article by my dearest friend  ರೋಹಿತ ತಂತ್ರಿ. Its a Nice article. Depicts the reality of current life which is extravagantly plastic !!. You all must read this... Posting it on Rohitha's behalf.


ವಾರದಲ್ಲಿ ಎರಡು ಮೂರು ಬಾರಿ Bisleri ನೀರು ತರಿಸುತ್ತೇನೆ ಮನೆಗೆ. 20 ಲೀಟರ್, 75 ರುಪಾಯಿ, ಸಣ್ಣ ಗಾತ್ರದ ಹುಡುಗನೊಬ್ಬ ಒಂದು ದೊಡ್ಡ bottleನಲ್ಲಿ ತಂದು ಕೊಟ್ಟು ಹೋಗುತ್ತಾನೆ. ನಗು ಮುಖ ಅವನದ್ದು. ನಾನೂ ಸಹಜವಾಗಿಯೇ ನಗುತ್ತೇನೆ ಅವನ ನಗುವಿಗೆ ಪ್ರತಿಯಾಗಿ. ನಗುವುದು ಸಹಜವಾದ ಕ್ರಿಯೆ, ಅಲ್ಲ್ವೇ? ಮತ್ತೆ ಏನಪ್ಪಾ ನಿನ್ನ ಸಮಸ್ಯೆ ಅಂತೀರಾ.., ನಗು ಮುಖದಿಂದ ಬರಮಾಡಿಕೊಂಡ ಆ ನೀರೇ ನನ್ನ ಸಮಸ್ಯೆ. ದುಡ್ಡು ಕೊಟ್ಟು ನೀರು ತರಬೇಕಾಯ್ತು ಅಂತಲ್ಲ. ಆ ನೀರು ಕೃತಕ ಅಂತ ನನಗನ್ನಿಸುತ್ತೆ. ಅದರ ರುಚಿ ಶುದ್ಧ artificial ಅಂತ ಮನಸು ಕಹಿ ಕಕ್ಕುತ್ತದೆ. ವಿಧಿಯಿಲ್ಲದೆ ಅದನ್ನೇ ಕುಡಿಯುವುದು ಅಭ್ಯಾಸ ಆಗೋಗಿದೆ. ಮನಸಿನ ಮೌನ ಪ್ರತಿಭಟನೆಯನ್ನು ಅದೇ ಕೃತಕ ನೀರು ತಣ್ಣೀರೆರಚಿ ತಂಪಾಗಿಸಿದೆ(?). ಬಹುಶಃ ನನ್ನ ಮನಸು ಕೂಡ ಕೃತಕವಾದ ಒಂದು ಸಮಾಧಾನವನ್ನ ಅಭ್ಯಾಸ ಮಾಡಿಕೊಂಡಂತಿದೆ. Officeಗೆ ಬಂದರೆ ಇಲ್ಲಿ ವಾತಾನುಕೂಲಿತ ವಾತಾವರಣ. ಆಂಗ್ಲ ಭಾಷೆಯಲ್ಲಿ Air Conditioning ಅಂತ ನಾವೇನು style ಆಗಿ ಹೇಳುತ್ತೇವೆಯೋ, ಅದು. ಅದಿಕ್ಕೆ ಯಾಕಪ್ಪ ರೊಳ್ಳೆ ತೆಗಿತಿ ಅಂತೀರಾ.., ಮತ್ತದೇ ಸಮಸ್ಯೆ, ಆ ವಾತಾವರಣ ಕೃತಕ ಅಂತ ಅನಿಸುತ್ತದೆ. ತಂಪಾದ ವಾತಾವರಣದಲ್ಲಿ ಗಣಕ ಯಂತ್ರದ ಮುಂದೆ ಕೂತು ಕೆಲಸ ಮಾಡೋದೇ ಮಹಾ ಭಾಗ್ಯ, modern ಅಂತ ಕರೆಯಿಸಿ ಕೊಳ್ಳೋ ಜಗತ್ತಿದು, ಇದುವೇ ಜೀವನ ಶೈಲಿ, ಇದೇ ಜೀವನ, ಮುಂದಿನ ಜಗತ್ತು ಹೀಗೆ ಬದುಕೋದು, modern ಹುಡುಗ ನೀನು, ಆಗಲ್ಲ ಅಂದ್ರೆ ಹೇಗೆ? Adjust ಮಾಡ್ಕೊಬೇಕಪ್ಪ ಅಂತೀರಾ..., ಹೌದು ಬಿಡಿ, ಈ ಕೃತಕತೆಯ ಸುಳಿಗೆ ಸಿಲುಕಿ ಅಂತರಾತ್ಮ ವಿಲವಿಲಾಂತ ಒದ್ದಾಡುತ್ತ ಇದ್ದದ್ನ ನಾನೇ ಬೇಕುಂತ್ಲೇ ನಿರ್ಲಕ್ಷಿಸಿದ್ದೇನೆ. ನನ್ನ ಭಾವನೆಗಳನ್ನೇ ಕಡೆಗಾಣಿಸಿ ಮುನ್ನುಗ್ಗುವಷ್ಟು ಕೃತಕವಾಗಿ ಬಿಟ್ಟೆನೆ..? ಉತ್ತರಕ್ಕಾಗಿ ನಾನು ಬರೆಯುತ್ತಿಲ್ಲ. ಅಡುಗೆ ಮಾಡಲು ಹೋದರೆ, ಕಣ್ಣಿಗೆ ಬರೀ readymade, ready to cook, ready to eat ಅಂತ ಲೇಬಲ್ ಅಂಟಿಸಿಕೊಂಡು ಕೂತಿರೋ ಪದಾರ್ಥಗಳ ದರ್ಶನ. ಮನುಷ್ಯ ಒಂದೊಳ್ಳೆ ಅಡುಗೆಯನ್ನೂ ಮಾಡಲಾರದಷ್ಟು ಕೃತಕವಾದನೆ? ಅಥವಾ ಸೋಮಾರಿತನವೇ? ಶುದ್ಧ ಹಣ್ಣಿನ ರಸ ಕುಡಿಯಲು ಹೋದರೆ ಕಣ್ಣಿಗೆ ಕುಕ್ಕುವ ಬಗೆ ಬಗೆಯ ಥಳಕು ಬಳುಕಿನ canಗಳು, tinಗಳು. ಕುಡಿದರೆ ಮತ್ತದೇ ಕೃತಕ ಲೋಕದ ಅಸಹ್ಯ ದರ್ಶನ. ಆದರೆ ಕೈನಲ್ಲಿ ಅದನ್ನ styleಆಗ್ ಹಿಡ್ಕೊಂಡು ಹೀರಿದರೆ, ಕ್ಷಮಿಸಿ ‘sip’ ಮಾಡಿದರೆ ನಿಮ್ಮ ಅಂತಸ್ತು ಒಂದು ಹೆಜ್ಜೆ ಮೇಲೆ ಅಂತೆ. ಬೇಡ ಅಂತ ನಿರಾಕರಿಸಿದ್ರೆ ಏ ಯಾಕೋ, ಚೆನ್ನಾಗಿರತ್ತೆ, ಕುಡಿಬೇಕು ಅಂತ ಗೆಳೆಯರ ಸಲಹೆಗಳು, ಪುಂಖಾನುಪುಂಖ ಪ್ರಲಾಪಗಳು. ಅಯ್ಯೋ ಅದೆಲ್ಲ ಬಿಡಿ, ಮನುಷ್ಯನ ಭಾವನೆಗಳೂ ಎಷ್ಟೊಂದು ಕೃತಕವಾಗಿ ಹೋಗುತಿವೆ ಕಾಲ ಬದಲಾದಂತೆ, ಒಳ್ಳೆಯ ಮನಸ್ಸಿನಿಂದ ಜೊತೆ ಕೊಡುವವರಿಲ್ಲ, ತಮ್ಮ ಮೌನದಿಂದಲೇ ಹಿತ ನೀಡುವವರಿಲ್ಲ, ನಮ್ಮಿಂದ ಕೆಲಸ ಆಗಬೇಕಾಗಿಲ್ಲದಿದ್ರೂ ಒಂದೆರಡು ನಿಮಿಷ ಭಾವನೆಗಳಿಗೆ ಕಿವಿಯಾಗುವವರಿಲ್ಲ, ಮುಖ ನೋಡಿ ಕಪಟವಿಲ್ಲದೆ ನಕ್ಕರೆ ವಾಪಾಸು ನಗುವವರಿಲ್ಲ. ಯಾಕೆ? ಯಾಕೆ ಹೀಗಾಯ್ತು ಮನುಕುಲ? ಯಾಕಷ್ಟು ಕೃತಕವಾದ ಜೀವನ ಅಪ್ಪಿಕೊಂಡು ಅದನ್ನ ಸಹಿಸಿಕೊಂಡು ಅದರೊಂದಿಗೇ ಬದುಕುತ್ತಿದ್ದೇವೆ? ಅಯ್ಯೋ ಬಿಡಿ ಸಾರ್, ನಾವು ಅತಿಯಾಗಿ ನಂಬಿಕೊಂಡಿರುವ ಆ ದೇವರ ಮುಂದಿನ ದೀಪ ಕೂಡ switchನಿಂದ ಹಚ್ಚಿಕೊಳ್ಳುತ್ತವೆ, ಇಂಥಾ ದಿನಗಳಲ್ಲಿ ನೆನಪುಗಳು ಮಾತ್ರ ನೈಜತೆಯ ಸಹಜತೆಯ ತಾಜಾತನ ಹೊದ್ದಿರಲು ಸಾಧ್ಯ.
ಮತ್ತೇ ನೆನಪುಗಳನ್ನೂ ಕೃತಕ ಮಾಡಿಕೊಳ್ಳದಿರಿ J please!! (ನಾವು ಉಪಯೋಗಿಸೋದು ಹೆಚ್ಚಿನವು ಕೃತಕವೇ, ಹಾಗಾಗಿ ನಮ್ಮ ನೆನಪುಗಳು ಕೂಡ ಕೃತಕವಾದೀತೇ? ಉತ್ತರಕ್ಕಾಗಿ ಕಾಯಬೇಡಿ, ಅದು ನಮ್ಮಲ್ಲೇ ಇದೇ).

ಇಂತಿ ನಿಮ್ಮ,
ರೋಹಿತ ತಂತ್ರಿ.

Thursday, May 3, 2012

ಬರಿದಾದ ರಾತ್ರಿಯಲಿ.......


----------------------------------
ಬರಿದಾದ ರಾತ್ರಿಯಲಿ.......
----------------------------------

ದುಗುಡ ದುಖವ ಮರೆತು , ಕೆಲಸ ಕಾರ್ಯದ ಹೊರತು |
ಕಣ್ಮುಚ್ಚಿ ಕುಳಿತಿರುವೆ ಕನ್ನಡಿಯ ಮುಂದೆ ||

ಹಸೆಯಲ್ಲಿ ಹೊರಳಾಡಿ , ದಿಂಬಿನಲಿ ಮಿಸುಕಾಡಿ |
ಬರಿದಾದ ರಾತ್ರಿಯಲಿ ನೀ ಬರ್ವ್ಯೆನ್ದು ಕಾದೆ ||

ಮನಸನ್ನೆ ಮರೆತಿರುವೆ, ದುಡಿ ದಣಿದು ಸೋತಿರುವೆ |
ಇಷ್ಟಾದರೂ ಬರಬಾರದೇ ......  ಒನ್ದಿನಿತು ನಿದ್ದೆ ||

-- ರಾಜವರ್ಧನ

Tuesday, February 28, 2012

ಈ ಜಗದೊಳಗೆ

‎..............................
ಈ ಜಗದೊಳಗೆ
..............................

ಸುತ್ತಣ ಸಡಗರದಲಿ ಮನದ
ಮರುಕವ ಮೆಲುಕು ಹಾಕಲಾರೆ |

ಬರಿದಾದ ನಗೆಯ ಭಂಡಾರವ
ಬಗೆದೇನೂ ಹುಡುಕಲಾರೆ |

ಬದುಕಿನ ಅನುಲೋಮ ವಿಲೊಮದ ಅಲೆಗಳು
ತೊಯ್ಯುತಿವೆ ಅಲೆಮಾರಿ ಮನವ |

ಸಾವಿರ ಸೂರ್ಯರ ಕಿರಣಗಳೂ
ಅಳಿಸಲಾರದೀ ಹೃದಯದ ಭ್ರಮನಿರಸವ |

ಬಿಡಲಾರದ ಬಾಂಧವ್ಯಗಳೆ ಹಿಡಿದಿಟ್ಟಿವೆ
ಈ ಗುರಿಯಿರದ ಬಾಳ್ವೆಯ |

ತುಡುಗು ನಗೆಯ ತುಟಿಗಳಲಿ
ಏನುದುರೀತು ಕಾಳಿದಾಸನ ಕಾವ್ಯ ||

-- ರಾಜವರ್ಧನ

Tuesday, April 26, 2011

WOH .........................

Sapno ki jhund mein yadoon ki karavate !

Mukaddar ki mehefil mein tanahayi ki ulzane !


Rishton ki geheraayiyon mein kyon dhoondate rahe dil tumharee !


Paas dariya hai fir bhi na bhuje pyaas humaree !

Sehemi raat ki kaali goonj se darke pyaar ki chidiya toh ud gayi !


Khair , bachi Kuchi vaadiyoon mein mohabbat ki mehek toh chod gayi !

--Rajavardhan

Monday, December 20, 2010

Sheela Aunty ki Javaani

Gir Koodke chadein Pahaadein !
Park ke chakkar Din Dahaadein !
Khaayein kam Peeyein sirf Paani !
Phir Vaapas na Aayi Sheela Aunty  ki Javaani !


गिर कूदके छड़ें पहाड़ें !
पार्क के चक्कर दिन दहाड़ें !
खायें कम पीए सिर्फ़ पानी !
फिर भी वापस ना आई शीला आंटी  की जवानी !