Friday, December 7, 2012

ಕಾಶ್ಯಪರು !!

ಕಾಶ್ಯಪರು
-------------

...........


ನಾನೊಲ್ಲೆ ಎಂದೆ ನೀ ನಲ್ಲೆ |

ನಿನ್ನೆದೆಯ ದುಗುಡವ ನಾನರಿಯೆನೇ ||

ಸೊಗಡಿಹುದು ನನ್ನಲ್ಲಿ , ಕಣ್ಬಿಟ್ಟು ನೋಡೊಮ್ಮೆ |

ದಾನವನೂ ಕಾಶ್ಯಪನೆ , ವಾಮನನೂ ಕಾಶ್ಯಪನೆ ||

ದೈತ್ಯ ಅಪ್ಸರೆಯರ ಅಪ್ಪ ಒಂದಲ್ಲವೇ |

ನಮ್ಮಿಬ್ಬರಾ ಮನದ ಕೆಸರು ಕಪ್ಪಲ್ಲವೇ ||

ನಾನೊಲ್ಲೆ ಎಂದೆ ನೀ ನಲ್ಲೆ |

ಸೊಗಡಿಹುದು ನನ್ನಲ್ಲಿ , ಕಣ್ಬಿಟ್ಟು ನೋಡೊಮ್ಮೆ ||

............

-Rajavardhan Bhat

Wednesday, December 5, 2012

ನೀನು !!


ನೀನು
-----------

.........

ಕಡುನೀಲಿ ಕಣ್ಣುಗಳೇ , ನಿಮ್ಮಾಳ ತಿಳಿಯದೆನಗೆ

ಬಳಿ ನಿಂತು ಅಳೆಯುವಾಸೆ , ತಲೆ ತನಕ ಮುಳುಗುವಾಸೆ

ಕಾಡಿಗೆಯ ಕಪ್ಪಾಗ್ಲಾ , ಅಧರದ ಮುತ್ತಾಗ್ಲಾ

ನಸುಗೆನ್ನೆ ಕೆಂಪಾಗ್ಲಾ , ಹಣೆಯ ಬೊಟ್ಟಾಗ್ಲಾ

ನೀಳ ನಾಸಿಕದಲ್ಲೊಂದು, ಪುಟ್ಟ ಮೂಗುತಿಯಾಗ್ಲಾ

ತಿಳಿಯದೇ ಜಾರಿರುವೆ , ಎದೆತನಕ ತನಕ ಮುಳುಗಿರುವೆ

ಕಡುನೀಲಿ ಕಣ್ಣುಗಳೇ , ನಿಮ್ಮಾಳ ತಿಳಿಯದೆನಗೆ

-Rajavardhan Bhat

.........