..............................
ಈ ಜಗದೊಳಗೆ
..............................
ಸುತ್ತಣ ಸಡಗರದಲಿ ಮನದ
ಮರುಕವ ಮೆಲುಕು ಹಾಕಲಾರೆ |
ಬರಿದಾದ ನಗೆಯ ಭಂಡಾರವ
ಬಗೆದೇನೂ ಹುಡುಕಲಾರೆ |
ಬದುಕಿನ ಅನುಲೋಮ ವಿಲೊಮದ ಅಲೆಗಳು
ತೊಯ್ಯುತಿವೆ ಅಲೆಮಾರಿ ಮನವ |
ಸಾವಿರ ಸೂರ್ಯರ ಕಿರಣಗಳೂ
ಅಳಿಸಲಾರದೀ ಹೃದಯದ ಭ್ರಮನಿರಸವ |
ಬಿಡಲಾರದ ಬಾಂಧವ್ಯಗಳೆ ಹಿಡಿದಿಟ್ಟಿವೆ
ಈ ಗುರಿಯಿರದ ಬಾಳ್ವೆಯ |
ತುಡುಗು ನಗೆಯ ತುಟಿಗಳಲಿ
ಏನುದುರೀತು ಕಾಳಿದಾಸನ ಕಾವ್ಯ ||
-- ರಾಜವರ್ಧನ